Header Ads
Breaking News

ಮುಖಸೌಂದರ್ಯ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ವಿಯಾದ ಮುಕ್ಕದ ಶ್ರೀನಿವಾಸ ಆಸ್ಪತ್ರೆಯ ವೈದ್ಯರು

ಮುಖದ ವಿರೂಪತೆಯಿಂದ ಬಳಲುತ್ತಿದ್ದ ಯುವತಿಯೊಬ್ಬಳಿಗೆ ಮುಕ್ಕಾದ ಶ್ರೀನಿವಾಸ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಮುಖಸೌಂದರ್ಯ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಯುವತಿಯೊಬ್ಬಳು ತನ್ನ ಮೇಲ್ಭಾಗದ ದವಡೆಯ ತೊಂದರೆಯಿಂದ ಮುಖ ವಿರೂಪಗೊಂಡು ಆಹಾರ ಜಗಿಯುವ ತೊಂದರೆ ಎದುರಿಸುತ್ತಿದ್ದಳು. ಈಕೆಗೆ ಶ್ರೀನಿವಾಸ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆಗೂ ಮೊದಲು ಹುಡುಗಿಯು ಒಂದು ವರ್ಷಗಳ ಕಾಲ ಡಾ.ಸಿದ್ಧಾರ್ಥ ಅವರ ಬಳಿ ದಂತ ಪಂಕ್ತಿ ಸರಿಪಡಿಸುವ ಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಪ್ರಕ್ರಿಯೆ ಮತ್ತು ಫಲಿತಾಂಶದ ಬಗ್ಗೆ ಯುವತಿ ಹಾಗೂ ಆಕೆಯ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್‌ನ ಡೀನ್ ಡಾ. ಮನೋಜ್ ವರ್ಮ ನೇತೃತ್ವದ ತಂಡದ ಡಾ. ಕೇಶವ ಭಟ್, ಡಾ.ರಜೀತ್ ಶೆಟ್ಟಿ, ಡಾ.ವಿದ್ಯಾಚಂದ್ರ. ಡಾ. ಪ್ರವೀಣ್ ಶೆಟ್ಟಿ, ಡಾ. ಸಿದ್ಧಾರ್ಥ್ ಮತ್ತು ಡಾ. ಸತ್ಯಜಿತ್ ಕಾರಂತ್ ಅವರ ತಂಡ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.a

Related posts

Leave a Reply

Your email address will not be published. Required fields are marked *