
ರಾಜ್ಯ ಸರ್ಕಾರ ಶಾಲಾ ಕಾಲೇಜು ಆರಂಭಿಸಿದೆ ಆದರೆ ಸಿಲೇಬಸ್ ವಿಚಾರದಲ್ಲಿ ಸ್ಪಷ್ಟತೆಯಿಲ್ಲ. ಸರಿಯಾದ ಮಾಹಿತಿಯನ್ನು ನೀಡದೆ. ವಿದ್ಯಾರ್ಥಿಗಳ ಮತ್ತು ಪೋಷಕರ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಶಾಸಕ ಯು.ಟಿ. ಖಾದರ್ ಆರೋಪಿಸಿದರು.
ಅವರು ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ನಡೆದ ಮಾದ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಯಾಕೆ ಶಾಲಾ ಕಾಲೇಜು ಆರಂಭಿಸಿದ್ದಾರೆ ಎಂದು ಕೇಳಿದರೆ ಅವರಲ್ಲಿ ಉತ್ತರವಿಲ್ಲ. ಆಫ್ಲೈನ್ ಮತ್ತು ಆನ್ಲೈನ್ ಕ್ಲಾಸ್ ಒಂದೇ ಸಲಕ್ಕೆ ಮಾಡುವುದು ಹೇಗೆ ಸಾದ್ಯ. ಅಷ್ಟೇ ಅಲ್ಲದೆ ಇನ್ನು ಕೂಡ ಸಿಲೇಬಸ್ ಪಿಕ್ಸ್ ಮಾಡದೇ ಗೊಂದಲ ಸೃಷ್ಠಿ ಮಾಡಿದೆ ಎಂದು ಆರೋಪಿಸಿದರು. ಈ ಸಂದರ್ಭ ಮಾಜಿ ಸಚಿವ ರಮನಾಥ್ ರೈ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಎಐಸಿಸಿ ಸದಸ್ಯೆ ಕವಿತಾ ಸನಿಲ್, ಪನಪಾ ಸದಸ್ಯ ಶಶಿಧರ್ ಹೆಗ್ಡೆ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸೇರಿದಂತೆ ಮತ್ತಿತರ ಕಾಂಗ್ರಸ್ ನಾಯಕರು ಉಪಸ್ಥಿತರಿದ್ದರು.