Header Ads
Header Ads
Breaking News

ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್ ಪದಗ್ರಹಣ ಸಮಾರಂಭ

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್ ಇದರ ಪದಗ್ರಹಣ ಸಮಾರಂಭ ಬುಧವಾರ ಸಂಜೆ ಲೊರೆಟ್ಟೊ ಹಿಲ್ಸ್‌ನ ಸಭಾಂಗಣದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಪದ್ಮರಾಜ್ ಬಲ್ಲಾಳ್, ಕಾರ್ಯದರ್ಶಿಯಾಗಿ ಶೃತಿ ಮಾಡ್ತ, ಕೋಶಾಧಿಕಾರಿಯಾಗಿ ರಾಮಚಂದ್ರ ಶೆಟ್ಟಿಗಾರ್ ಮತ್ತಿತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.

ಪದ್ಮರಾಜ್ ಬಲ್ಲಾಳ್ ಮಾತನಾಡಿ ರೋಟರಿ ಸೇರಿದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಲಭಿಸಿದೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಪದಗ್ರಹಣಾಧಿಕಾರಿ ಎಂ.ಎಂ.ಸುರೇಶ್ ಚೆಂಗಪ್ಪ ಮಾತನಾಡಿ  ರೋಟರಿ ಸಂಸ್ಥೆ ಸೇರಲು ಹಣವಂತನಾಗಿಯೇ ಇರಬೇಕಾಗಿಲ್ಲ, ಬದಲಾಗಿ ಮಾನವೀಯತೆ ಇರುವ ಹೃದಯ ಶ್ರೀಮಂತಿಕೆ ಇರಬೇಕು ಎಂದರು. ಮಾನವೀಯತೆ ಇಂದಿನ ಅನಿವಾರ್ಯತೆ ಉತ್ತಮ ಸಮಾಜದ ನಿರ್ಮಾಣ ಎನ್ನುವ ಒಂದು ಕಳಕಳಿ ಮನಸ್ಸಿ ಹುಟ್ಟಿದರೆ ಅದೇ ಅದ್ಭುತ ಸೇವೆಯಾಗಿ ಮೂಡುತ್ತದೆ ಎಂದರು. ಫಲಾನುಭವಿ ಭವಾನಿ ಅವರ ಪರವಾಗಿ ರವೀಣ ಕುಲಾಲ್ ಸೋಲಾರ್ ಸ್ವೀಕರಿಸಿದರು. ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಬಾ ಪುರಸ್ಕಾರ ನಡೆಯಿತು. ಅತ್ಯುತ್ತಮ ಸಾದನೆಗೈದ ನಿವೃತ್ತ ಶಿಕ್ಷಕ ನಾರಾಯಣ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.೯ ಮಂದಿ ನೂತನ ಸದಸ್ಯರು ಸೇರ್ಪಡೆಗೊಂಡರು.
ಪ್ರಕಾಶ್ ಕಾರಂತ್, ಸಂಜೀವ ಪೂಜಾರಿ, ಕೆ.ಎನ್. ಹೆಗ್ಡೆ , ರಾಮಚಂದ್ರ ಶೆಟ್ಟಿಗಾರ್, ಪ್ರಭಾಕರ ಪ್ರಭು ಅವರನ್ನು ಗೌರವಿಸಲಾಯಿತು. ಕ್ಲಬ್ ಬುಲೆಟಿನ್ ಅನ್ನು ರಿತೇಶ್ ಬಾಳಿಗ ಬಿಡುಗಡೆಗೊಳಿಸಿದರು.

Related posts

Leave a Reply

Your email address will not be published. Required fields are marked *