Header Ads
Breaking News

ಲಾಕ್‍ಡೌನ್ ಮಾಡೋದ್ರಿಂದ ಮಧ್ಯಮ ವರ್ಗದ ಜನರಿಗೆ ತೊಂದರೆ : ಮಾಜಿ ಮೇಯರ್ ಕವಿತಾ ಸನಿಲ್ ಹೇಳಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರದಿಂದ ಲಾಕ್‍ಡೌನ್ ಜಾರಿ ಮಾಡ್ರೋದಿಂದ ಮಧ್ಯಮ ವರ್ಗದ ಜನರಿಗೆ ತೀವ್ರ ತೊಂದರೆ ಆಗಲಿದೆ ಎಂದು ಮಾಜಿ ಮೇಯರ್ ಕವಿತಾ ಸನಿಲ್ ಹೇಳಿದ್ರು. ಕೊರೊನಾ ವೈರಸ್‍ನಿಂದ ಜಿಲ್ಲೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಬಗೆ ಹರಿಸುವ ಪ್ರಯತ್ನ ಮಾಡಬೇಕು, 

ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ, ಸಂಸದರು, ಶಾಸಕರು ಈ ಬಗ್ಗೆ ಗಮನ ಹರಿಸಬೇಕು. ಇನ್ನು ಜಿಲ್ಲೆಯಲ್ಲಿ ಲಾಕ್‍ಡೌನ್ ಮಾಡೋ ಪರಿಸ್ಥಿತಿ ನಿರ್ಮಾಣವಾಗಲು ಕಾರಣೀಕರ್ತರು ಯಾರು..? ಜಿಲ್ಲೆಯಲ್ಲಿ ಕೊರೋನಾ ವೈರಸ್ ಇರಲೇ ಇಲ್ಲ. ಸೋಂಕು ಹರಡುವಿಕೆ ಕಾರಣವೇನೂ ಎಂಬುವುದನ್ನ ತಿಳಿದುಕೊಳ್ಳಬೇಕು. ವಿಮಾನದ ಮೂಲಕ ಹೊರ ರಾಜ್ಯದಿಂದ ಅದೆಷ್ಟೋ ಜನರು ಆಗಮಿಸುತ್ತಾರೆ. ಅವರಿಗೆ ಕ್ವಾರೆಟೈಂನ್ ಮಾಡುತ್ತಿಲ್ಲ. ಇನ್ನು ಖಾಸಗಿ ಆಸ್ಪತ್ರೆಗಳು ಲೂಟಿ ಮಾಡುವ ಕೆಲಸ ಮಾಡಲಾಗುತ್ತದೆ.ಇದರ ಬಗ್ಗೆ ಸಚಿವರು ಗಮನ ಹರಿಸಬೇಕೆಂದು ಒತ್ತಾಯಿಸಿದ್ರು.

Related posts

Leave a Reply

Your email address will not be published. Required fields are marked *