Header Ads
Breaking News

ಲಾಕ್‍ಡೌನ್ ಸಮಯವನ್ನು ಸಮಾಜ ಸೇವೆಗೆ ಬಳಸಿಕೊಂಡ ಅವಳಿ ಜಿಲ್ಲೆಗಳ ಯುವಕರು

ಗಡಿಕಾಯೊ ಯೋಧರೋರ್ವರ ನೇತ್ರತ್ವದ ಅವಳಿ ಜಿಲ್ಲೆಗಳ ಯುವಕರ ತಂಡವೊಂದು ಲಾಕ್ ಡೌನ್ ಸಮಯವನ್ನು ಸಮಾಜ ಸೇವೆಗೆ ಬಳಸಿಕೊಳ್ಳುವ ಮೂಲಕ ಇತರಿಗೆ ಮಾದರಿಯಾದ ಘಟನೆ ಕಾಪು ಸಮೀಪದ ಇನ್ನಂಜೆಯಲ್ಲಿ ನಡೆದಿದೆ. ಅಷ್ಟಕ್ಕೂ ಏನಿದು ವಿಷಯ..? ಈ ಸ್ಟೋರಿ

ಪ್ರಕೃತಿ ವಿಕೋಪದಿಂದಾಗಿ ಬಡಪಾಯಿ ಇನ್ನಂಜೆ ಗ್ರಾಮದ ವಿಶ್ವನಾಥ್ ಎಂಬವರಿಗೆ ಸೇರಿದ ದನದ ಹಟ್ಟಿಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ದುರಸ್ಥಿ ನಡೆಸಿದ ಯುವಕರ ತಂಡ ಸಾರ್ವಜನಿಕರಿಂದ ಬೇಷ್ಎಣಿಸಿಕೊಂಡಿದೆ.

ಕೇವಲ ಮೂರು ತಿಂಗಳ ಹಿಂದೆಯಷ್ಟೆ  ಉಡುಪಿ- ಮಂಗಳೂರು ಭಾಗದ ಯುವಕರನ್ನು ಒಟ್ಟುಗೂಡಿಸಿ ಕಟ್ಟಿದ ಸಂಸ್ಥೆಯೆ ‘ಸತ್ಯದ ತುಳುವೆರ್” ಈ ಸಂಸ್ಥೆಯ ಜನಕ ಗಡಿಕಾಯೋ ಯೋಧ ಶಿವಪ್ರಸಾದ್ ಮಲ್ಪೆ ಎಂಬುದು ಇಲ್ಲಿ ಗಮನಾರ್ಹ, ಹಲವರ ನಾಯಕತ್ವದಲ್ಲಿ ನೂರಕ್ಕೂ ಅಧಿಕ ಯುವಕರ ತಂಡ ಬಾಲ್ಯವಸ್ಥೆಯಲ್ಲೇ ಸಮಾಜೋಮುಖಿ ಕಾರ್ಯ ಆರಂಭಿಸಿದರು. ಆರಂಭದಲ್ಲಿ ರಕ್ತದಾನ, ವನಮಹೋತ್ಸವ ಇದೀಗ ಹಟ್ಟಿ ದುರಸ್ಥಿ ಮಾಡುವ ಮೂಲಕ ತಮ್ಮ ಸಂಸ್ಥೆಯ ಇರಾದೆಯನ್ನು ಸಮಾಜಕ್ಕೆ ಗೊತ್ತು ಪಡಿಸಿದ್ದಾರೆ. ಈ ಸೇವೆಗೆ ತಗುಲುವ ವೆಚ್ಚವನ್ನು ತಮ್ಮ ಸಂಸ್ಥೆಯ ಸದಸ್ಯರೇ ಒಟ್ಟು ಸೇರಿಸಿ ಬರಿಸುವುದು ಮತ್ತೊಂದು ವಿಶೇಷ. ಈ ಸಂಸ್ಥೆಯಲ್ಲಿ ಅವಳಿ ಜಿಲ್ಲೆಗಳ ನೂರಕ್ಕೂ ಅಧಿಕ ಸದಸ್ಯರಿದ್ದು, ಈ ದಿನ ಹಟ್ಟಿ ದುರಸ್ಥಿತಿಗೆ ಲಾಕ್ ಡೌನ್ ಸಮಸ್ಯೆಯಿಂದಾಗಿ ಮೂವತ್ತು ಮಂದಿ ಸದಸ್ಯರು ಪಾಲ್ಗೊಂಡಿದ್ದರು, ಸಮಜೋಮುಖಿ ಚಿಂತನೆ ಯುಳ್ಳ ಯುವಕರ ತಂಡ ಇದಾಗಿದ್ದು ಇದೀಗ ಸ್ಥಳೀಯವಾಗಿ ನಮ್ಮ ಸಂಸ್ಥೆಯ ಕಾರ್ಯಚರಣೆ ಆರಂಭಿಸಲಾಗಿ ಮುಂದಿನ ದಿನದಲ್ಲಿ ಅವಳಿ ಜಿಲ್ಲೆಗಳಿಗೂ ಇದನ್ನು ವಿತರಿಸಲಾಗುವುದು, ಈ ಸಂಸ್ಥೆಯ ಆಧಾರ ಸ್ತಂಭ ಗಡಿಕಾಯೋ ಯೋಧ ಎಂಬುದು ನಮ್ಮ ಸಂಸ್ಥೆಗೆ ಮತ್ತಷ್ಟು ಹೆಮ್ಮೆ ಎಣಿಸಿದೆ ಎಂಬುದಾಗಿ ಸಂಸ್ಥೆಯ ಗೌರವಾಧ್ಯಕ್ಷ ದಿನಕರ್ ಶೆಟ್ಟಿ ಕುರ್ಕಾಲು ತಿಳಿಸಿದ್ದಾರೆ.

ಸಲಹೆಗಾರರಾದ ಗೀತಾಂಜಲಿ ಸುವರ್ಣ ಮಾತನಾಡಿ ಇಂದಿನ ದಿನಗಳಲ್ಲಿ ಯುವ ಪೀಳಿಗೆ ದಾರಿ ತಪ್ಪುತ್ತಿರುವ ಈ ಕಾಲಘಟ್ಟದಲ್ಲಿ ಈ ಯುವಕರ ತಂಡ ಇಂಥಹ ಸಮಜೋಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿರುವುದು ಸಂತೋಷದ ವಿಷಯ ಎಂದ್ರು. 

ಪಲಾನುಭಾವಿ ವಿಶ್ವನಾಥ್ ರವರು ಮಾತನಾಡಿ ಎಲೆಕ್ಟ್ರಿಕ್ ಕೆಲಸ ಮಾಡುತ್ತಿರುವ ನನಗೆ ಲಾಕ್ ಡೌನ್ ನಿಂದಾಗಿ ಕೆಲಸವೇ ಇಲ್ಲ, ಇದೇ ಸಂದರ್ಭ ಮಳೆ ಗಾಳಿಗೆ ದನದ ಹಟ್ಟಿಗೆ ಹಾನಿಯಾಗಿದ್ದು ಸಂಕಷ್ಟದ ಸ್ಥಿತಿಯಲ್ಲಿ ಈ ಸತ್ಯದ ತುಳುವೆರ್ ಸಂಸ್ಥೆಯ ಗಮನಕ್ಕೆ ತಂದಾಗ ಅವರೇ ಮುಂದೆ ನಿಂತು ಹಟ್ಟಿ ದುರಸ್ಥಿ ಮಾಡಿಕೊಟ್ಟಿದ್ದಾರೆ. ದೇವರು ಅವರಿಗೆ ಇನ್ನಷ್ಟು ಬಡವರ ಸೇವೆ ಮಾಡುವ ಶಕ್ತಿಯನ್ನು ನೀಡಲಿ ಎಂದು ಆರೈಸಿದ್ದಾರೆ.

ಒಟ್ಟಿನಲ್ಲಿ ‘ಸತ್ಯದ ತುಳುವೆರ್” ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Related posts

Leave a Reply

Your email address will not be published. Required fields are marked *