Breaking News

ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬೀಡಿ ಕಾರ್ಮಿಕರಿಂದ ಪ್ರತಿಭಟನಾ ಮೆರವಣಿಗೆ

ಮಂಜೇಶ್ವರ: ಬೀಡಿ ಕಾರ್ಮಿಕರಿಗೆ ಬಾಕಿ ಇರುವ ತುಟ್ಟಿ ಭಟ್ಟೆಯನ್ನು ಶೀಘ್ರವೇ ವಿತರಿಸಬೇಕು ಸೇರಿದಂತೆ ಇತರ ಹಲವು ಬೇಡಿಕೆಗಳನ್ನು ಮುಂದಿಟ್ಟು ಬೀಡಿ ಕಾರ್ಮಿಕರ ಫೆಡರೇಶನ್ ರವರ ಸಂಘಟನೆಯಾದ ಸಿ ಐ ಟಿ ಯು ನ ನೇತೃತ್ವದಲ್ಲಿ ಬೀಡಿ ಕಂಪನಿಗಳ ಮೂರು ಡಿಪೋಗಳಿಗೆ ಪ್ರತಿಭಟನೆಯನ್ನು ಹಮ್ಮಿ ಕೊಳ್ಳಲಾಯಿತು.ಬೀಡಿ ಎಲೆಯ ಕಟ್ಟಿಂಗ್ ಮೊತ್ತವನ್ನು 100 ಬೀಡಿಗೆ ಒಂದು ಸಾವಿರ ರೂ. ನಿಂದ 150 ರೂ. ಗೇರಿಸಿದ ಕ್ರಮವನ್ನು ಹಿಂದಕ್ಕೆ ಪಡೆಯಬೇಕು, 2015 ಎಪ್ರಿಲ್ ನಿಂದ ವಿತರಿಸಲು ಬಾಕಿ ಇರುವ ತುಟ್ಟಿ ಭತ್ತೆಯನ್ನು ಶೀಘ್ರವೇ ವಿತರಿಸ ಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನಾ ಧರಣಿಯನ್ನು ನಡೆಸಲಾಯಿತು. ಸಿ ಐ ಟಿ ಯು ರಾಜ್ಯ ಉಪಾಧ್ಯಕ್ಷ ಪಿ ರಾಘವನ್ ಧರಣಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇದೀಗ ನೂತನವಾಗಿ ಅಧಿಕರಕ್ಕೇರಿದ ಸರಕಾರ ಬೀಡಿ ಕಾರ್ಮಿಕರನ್ನು ರಕ್ಷಿಸಲು ಹಲವು ರೀತಿಯ ಯೋಜನೆಗಳನ್ನು ಕೈಗೊಳ್ಳುತ್ತಿರುವಾಗ ಬೀಡಿ ಕಂಪನಿಗಳು ಕಾರ್ಮಿಕರನು ನಾಶದತ್ತ ಕೊಂಡೊಯ್ಯುತ್ತಿರುವುದು ಖೇದಕರ ಎಂಬುದಾಗಿ ಗುಡುಗಿದರು. ಕಾಸರಗೋಡು, ಹೊಸದುರ್ಗ, ಮಂಜೇಶ್ವರ ಮೊದಲಾದ ಡಿಪೋಗಳಿಗೆ ಪ್ರತಿಭಟನಾ ಧರಣಿಯನ್ನು ಹಮ್ಮಿ ಕೊಳ್ಳಲಾಗಿತ್ತು.

Related posts

Leave a Reply