Header Ads
Breaking News

ವಿಶೇಷ ಮಕ್ಕಳ ಶಿಕ್ಷಕರ ಗೌರವಧನ ದ್ವಿಗುಣಗೊಳಿಸಲು ಒತ್ತಾಯ : ಮಂಗಳೂರಲ್ಲಿ ಡಾ|ವಸಂತ್ ಕುಮಾರ್ ಶೆಟ್ಟಿ ಆಗ್ರಹ

ಶಿಶು ಕೇಂದ್ರೀಕೃತ ಶಿಕ್ಷಣ ಸಹಾಯಧನ ಯೋಜನೆಯಲ್ಲಿ ಅನುದಾನ ಪಡೆಯುತ್ತಿರುವ ರಾಜ್ಯದ ವಿಶೇಷ ಶಿಕ್ಷಕರ ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ನೀಡುತ್ತಿರುವ ಗೌರವಧನ ದ್ವಿಗುಣಗೊಳಿಸಲು ಮತ್ತು ವಿಶೇಷ ಶಿಕ್ಷಕರಿಗೆ ವೇತನ ನೀಡದಿರುವ ಬಗ್ಗೆ ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಂಘದಿಂದ ಮಂಗಳೂರಲ್ಲಿ ಮನವಿ ಸಲ್ಲಿಸಲಾಯ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ಯಾಮಲ ಹಾಗೂ ವಿಕಲಚೇತನ ಸಬಲೀಕರಣ ಅಧಿಕಾರಿ ಯಮುನಾ ಅವರ ಮುಖಾಂತರ ರಾಜ್ಯ ಸರ್ಕಾರ ಮನವಿ ಸಲ್ಲಿಸಿದ್ರು. ಈ ವೇಳೆ ಮಾತನಾಡಿದ ರಾಜ್ಯ ವಿಶೇಷ ಹಾಗೂ ಶಿಕ್ಷಕೇತರ ಸಂಘದ ಪ್ರಧಾನ ಕಾರ್ಯದರ್ಶಿ ಡಾ|ವಸಂತ್ ಕುಮಾರ್ ಶೆಟ್ಟಿ ಮಾತನಾಡಿ, ರಾಜ್ಯದ ವಿಶೇಷ ಶಾಲೆಗಳಲ್ಲಿ ಸೇವಾ ನಿರತರಾಗಿರುವ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಗೌರವಧನವನ್ನು ದ್ವಿಗುಣಗೊಳಿಸಬೇಕು. ಇನ್ನು ವಿಶೇಷ ಮಕ್ಕಳ ಶಿಕ್ಷಕರಿಗೆ ವೇತನ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ರು. ಈ ವೇಳೆ ಗೌರವ ಅಧ್ಯಕ್ಷ ಆಗ್ನೇಸ್ ಕುಂದರ್, ಅಧ್ಯಕ್ಷ ಡಾ|ಕಾಂತಿ ಹರೀಶ್, ಕರೆಪ್ಪ ಬಿ.ಹೆಚ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *