Header Ads
Header Ads
Breaking News

ಸಂಕಟದಲ್ಲಿ ವೆಂಕಟಾಪುರ ಸಾಲೆಮನೆ

ಕೇಸರಿನ ಗದ್ದೆಯಾದಭಟ್ಕಳ ತಾಲೂಕಿನ ಶಿರಾಲಿ ವೆಂಕಟಾಪುರದ ಸಾಲೆಮನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ
ಭಟ್ಕಳ ತಾಲುಕಿನ ಶಿರಾಲಿಯ ವೆಂಕಟಾಪುರದ ಸಾಲೆಮನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣವೂ ಪ್ರತಿ ಮಳೆಗಾಲದ ಸಂಧರ್ಭದಲ್ಲಿ ಸಂಪೂರ್ಣ ನೀರಿನಿಂದಾವೃತವಾಗುತ್ತಿದ್ದು, ಶಾಲೆಯ ಹೊರಗಿನ ಚರಂಡಿ ವ್ಯವಸ್ಥೆ ಸರಿಯಿಲ್ಲದೇ ಶಾಲಾ ಮಕ್ಕಳಿಗೆ ವಿಧ್ಯಾಭ್ಯಾಸ ಮಾಡಲು ಕಷ್ಟದಾಯಕವಾಗುತ್ತಿದೆ. ಅದಲ್ಲದೇ ಶಾಲೆಗೆ ಸೇರುವ ಮಕ್ಕಳ ಸಂಖ್ಯೆಯಲ್ಲು ಇಳಿಕೆ ಕ್ರಮ ಆಗುತ್ತಿದ್ದು, ಸತತ 20 ವರ್ಷದಿಂದ ಇದೇ ಸಮಸ್ಯೆಯಲ್ಲಿ ಶಾಲೆ ಮುನ್ನಡೆಯುತ್ತಿದೆ. ಹಾಗಿದ್ರೆ ಒಟ್ಟಾರೆ ಇಲ್ಲಿನ ತೊಂದರೆ ಏನು ಅಂತೀರಾ ಹಾಗಿದ್ರೆ ವರದಿ ನೋಡಿ.ಹೌದು, ಸತತ 20 ವರ್ಷಗಳಾದರೂ ಒಂದು ಚಿಕ್ಕ ಸಮಸ್ಯೆಗೆ ಪರಿಹಾರ ನೀಡಲು ಅಶಕ್ತವಾಗಿರುವಂತಹ ಘಟನೆ ತಾಲೂಕಿನ ಶಿರಾಲಿಯ ವೆಂಕಟಾಪುರದ ಸಾಲೆಮನೆಯ ಎದುರಾಗಿದೆ. ನಾಮಕಾವಸ್ಥೆಗೆ ಮಾತ್ರ ಇಲ್ಲಿನ ಸ್ಥಳಿಯ ಪಂಚಾಯತ್ ಸದಸ್ಯರೋರ್ವರು ಅವರ ವಾರ್ಡನ ಶಾಲೆಯ ಎದುರು ಮಳೆ ನೀರು ನಿಲ್ಲುತ್ತಿದ್ದರು ಈ ಬಗ್ಗೆ ಯಾವುದೇ ಗಮನ ಹರಿಸದೇ ಸ್ಥಳಕ್ಕೆ ಬಾರದೇ ನುಣುಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷದ ಮಳೆಗಾಲದಲ್ಲಿ ಸಾಲೆಮನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎದುರು ಮಳೆ ನೀರು ನಿಲ್ಲುತ್ತಿದ್ದು, ಪದೇ ಪದೇ ಪ್ರತಿ ವರ್ಷ ಸ್ಥಳಿಯ ಪಂಚಾಯತ್ ಸದಸ್ಯರಿಗೆ ಮನವಿ ನೀಡಿ ಅವರ ಗಮನಕ್ಕೆ ಬರುವಂತೆ ಮಾಡಿದ್ದರು. ಆದರೆ ಸ್ಥಳಿಯ ಶಿರಾಲಿ ಪಂಚಾಯತ್ ಸದಸ್ಯರಿಗೆ ಇಲ್ಲಿನ ಜನರು ಕೇವಲ ಚುನಾವಣಾ ಸಂಧರ್ಭದಲ್ಲಿ ಮತ ಹಾಕಲು ಮಾತ್ರ ನೆನಪಿರುತ್ತಾರೆ ಹೊರತು ಚುನಾವಣೆಯಲ್ಲಿ ಗೆಲ್ಲಿಸಿದರೆ ಜನರು ಯಾರೆ ಎನ್ನುವುದು ಮರೆತಂತೆ ವರ್ತಿಸುತ್ತಿದ್ದಾರೆ. ಶಾಲೆಯಲ್ಲಿ ಒಟ್ಟು ೧ರಿಂದ ೭ ತರಗತಿಯವರೆಗೆ ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿದ್ದು, ಮಳೆ ಬಂದರೆ ಶಾಲೆಯ ಆವರಣವೆಲ್ಲ ಸಂಪೂರ್ಣ ನೀರಿನಿಂದಾವೃತವಾಗುದಲ್ಲದೇ ಶಾಲಾ ಮಕ್ಕಳಿಗೆ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಶಾಲೆಗೆ ಬರುವ ಸಂಧರ್ಭದಲ್ಲಿ ಸಂಪೂರ್ಣ ಶುಭ್ರ ಶಾಲಾ ಸಮವಸ್ತ್ರವನ್ನು ಧರಿಸಿ ಶಾಲೆಗೆ ಬರುವ ಮಕ್ಕಳು ಮನೆಗೆ ಹಿಂತಿರುಗುವಾಗ ಬಟ್ಟೆ ಎಲ್ಲವು ಒದ್ದೆಯಾಗಿರುತ್ತವೆ. ಕಾರಣ ಶಾಲೆ ಎದುರಿಗೆ ನಿಲ್ಲುತ್ತಿರುವ ಮಳೆ ನೀರು. ಅದು ಅಲ್ಲದೇ ವರ್ಷದಿಂದ ವರ್ಷಕ್ಕೆ ಶಾಲೆಗೆ ಬರುವ ಮಕ್ಕಳ ಸಂಖ್ಯೆಯೂ ಕಡಿಮೆಯಾಗುತ್ತಿರುವುದು ಶಾಲೆ ನಡೆಸಲು ಕಷ್ಟವಾಗುತ್ತಿದೆ. ಸಮಸ್ಯೆ ತೀರಾ ಚಿಕ್ಕದಾಗಿದ್ದರು ಸಮಸ್ಯೆ ಪರಿಹಾರಕ್ಕೆ ಯಾವುದೇ ಆಸಕ್ತಿ ತೋರಿದಂತೆ ಕಂಡು ಬರುತ್ತಿಲ್ಲ. ಈ ಬಗ್ಗೆ ಇಲ್ಲಿನ ಸ್ಥಳಿಯ ನಾಗೇಶ ನಾಯ್ಕ ಸಮಸ್ಯೆಯ ಬಗ್ಗೆ ಸಮಸ್ಯೆ ಪರಿಹಾರದ ಬಗ್ಗೆ ವಿವರವಾಗಿ ನಮ್ಮ ವಾಹಿನಿಯ ಜೊತೆ ಮಾತನಾಡಿದ್ದು, “ ಶಾಲೆಯ ಎದುರು ಪ್ರತಿವರ್ಷ ಕೊಳಚೆ ನೀರು ತುಂಬುತ್ತಿದ್ದು, ಸಮಸ್ಯೆ ಪ್ರತಿ ವರ್ಷ ಮುಂದುವರೆಯುತ್ತಿದೆ. ಶಾಲೆಯಿಂದ ಅಣತಿ ದೂರದಲ್ಲಿನ ಚರಂಡಿಯು ಸಂಪೂರ್ಣ ಹೂಳಿನಿಂದ ತುಂಬಿದ್ದು, ಅಲ್ಲಿನ ಹೂಳನ್ನು ತೆರವುಗೊಳಿಸಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಆದರೆ ಇಲ್ಲಿನ ಸ್ಥಳಿಯ ಮೆಂಬರ್ ಮಾತ್ರ ರಾಜಕೀಯ ಮಾಡುತ್ತಿದ್ದು, ಮಕ್ಕಳ ಭವಿಷ್ಯದ ಜೊತೆಗೆ ಆಟವಾಡುತಿದ್ದಾರೆ.” ಎಂದು ಆರೋಪಿಸಿದರು.
೨೦೧೬-೧೭ನೇ ಸಾಲಿನಿಂದ ಬ್ರಿಕ್‌ವರ್ಕ ಪ್ರಗತಿ ಫೌಂಡೇಶನ್ ಬೆಂಗಳುರು ಶಾಲೆಯನ್ನು ದತ್ತು ಸ್ವೀಕಾರ ಮಾಡಿದ್ದು, ಶಾಲೆಯ ಸಮಗ್ರ ಅಭಿವೃಧ್ಧಿಯ ನಿಟ್ಟಿನಲ್ಲಿ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ. ಈ ಬಗ್ಗೆ ಬ್ರಿಕ್‌ವರ್ಕ ಪ್ರಗತಿ ಫೌಂಡೇಶನ್ ಮೇನೆಜರ್ ಮಾತನಾಡಿದ್ದು ಹೀಗೆ,
ಈ ಬಗ್ಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಆರತಿ ದೇವಿದಾಸ ಆಚಾರಿ ಮಾತನಾಡಿದ್ದು ಹೀಗೆ,ಒಟ್ಟಿನಲ್ಲಿ ಮಳೆ ಬಂದರೆ ಶಾಲೆಯ ಆವರಣ ಕೆರೆಯಂತಾಗುತ್ತಿದ್ದು, ಸಮಸ್ಯೆ ಪರಿಹಾರಕ್ಕೆ ಇಲ್ಲಿನ ಸ್ಥಳಿಯ ವಾರ್ಡ ಮೆಂಬರ್ ಶೀಘ್ರದಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ ಹೊರತು ಮಕ್ಕಳ ಭವಿಷ್ಯ ಮುಂದಿಟ್ಟುಕೊಂಡು ರಾಜಕೀಯ ಮಾಡುವ ಕೆಲಸ ಮಾಡುವುದು ಸರಿಯಲ್ಲ.

ವರದಿ: ರಾಘವೇಂದ್ರ ಮಲ್ಯ . ಭಟ್ಕಳ.

 

Related posts

Leave a Reply