Header Ads
Breaking News

ಸರಕಾರಿ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಶಿಬಿರ : ಇನ್ಫೋಮೇಟ್ ಫೌಂಡೇಶನ್(ರಿ) ವತಿಯಿಂದ ಆಯೋಜನೆ

ಇನ್ಫೋಮೇಟ್ ಫೌಂಡೇಶನ್ (ರಿ) ಹಾಗೂ ಇನ್ಫಾರ್ಮೇಶನ್ ಆಂಡ್ ಎಂಪವಮೆರ್ಂಟ್ ಸೆಂಟರ್ ಚೊಕ್ಕಬೆಟ್ಟು ವತಿಯಿಂದ ಹಮ್ಮಿಕೊಂಡ ಸರಕಾರಿ ಉದ್ಯೋಗಾವಕಾಶಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ ಎಂಬ ವಿಷಯದಲ್ಲಿ ಮಾಹಿತಿ ಶಿಬಿರ ಕೃಷ್ಣಾ ಪುರ ಅಲ್ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.ಕಾರ್ಯಕ್ರಮಕ್ಕೆ ಬದ್ರಿಯಾ ಜುಮಾ ಮಸೀದಿಯ ಹಿಫ್ಳ್ ಅಧ್ಯಾಪಕ ಹಾಫಿಲ್ ಇಮ್ರಾನ್ ಝುಹುರಿ ದುಆ ಮೂಲಕ ಚಾಲನೆ ನೀಡಿದರು. ಐಇಸಿ ಚೊಕಬೆಟ್ಟು ಉಸ್ತುವಾರಿ ನೌಷದ್ ಅಧ್ಯಕ್ಷತೆಯಲ್ಲಿ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಬದ್ರಿಯಾ ಜುಮಾ ಮಸೀದಿ ಕೃಷ್ಣಪುರ ಅಧ್ಯಕ್ಷರಾದ ಹಾಜಿ ಬಿ.ಎಂ ಮುಮ್ತಾಜ್ ಅಲಿ ಭಾಗವಹಿಸಿ ಕಾರ್ಯಕ್ರಮದ ಸಂಘಟಕರನ್ನು ಅಭಿನಂದಿಸಿದರು. ಅಲ್ ಬದ್ರಿಯಾ ಎಜುಕೇಶನ್ ಅಸೋಶಿಯೇಶನ್ ಮುಖ್ಯಸ್ಥರಾದ ಅಬ್ದುಲ್ ಖಾದರ್, ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಕುಳಾಯಿ, ಸಿವಿಲ್ ಸರ್ವಿಸ್ ತರಬೇತುದಾರ ಮೊಹಮ್ಮದ್ ಅಲಿ ರೂಮಿ ಕೃಷ್ಣಾ ಪುರ, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *