
ಸರ್ಕಾರವೇ ಖಾಸಗೀಕರಣಗೊಳ್ಳುತ್ತಿರುವ ಪ್ರಸಕ್ತ ವಿದ್ಯಾಮಾನದಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸಲು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯು ಅನಿವಾರ್ಯವಾಗಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಆಮೀನ್ ಮಟ್ಟು ಹೇಳಿದರು.
ಅವರು ಮಂಗಳೂರಿನ ವಿಕಾಸ ಬಳಗವು ನಗರದ ಕಚೇರಿಯಲ್ಲಿ ಏರ್ಪಡಿಸಿದ ಮೀಸಲಾತಿ ಹೋರಾಟ ಆತಂಕಗಳು, ಸಾಧ್ಯತೆಗಳು ವಿಷಯ ಕುರಿತ ಸಂವಾದಗೋಷ್ಠಿಯಲ್ಲಿ ಮಾತನಾಡಿದರು. ಒಂದು ಕಾಲದಲ್ಲಿ ಮೀಸಲಾತಿ ಫಲಾನುಭವಿಗಳೇ ಇಂದು ವಿರೋಧಿಸುತ್ತಿದ್ದಾರೆ. ಸಾಮಾಜಿಕ ಹಾಗೂ ಸ್ವಾಭಿಮಾನದ ಬದುಕನ್ನು ಅವರಿಗೆ ಅದು ನೀಡಿರುವ ಅರಿವೇ ಅವರಿಗಿಲ್ಲ. ಭೂ ಸುಧಾರಣಾ ಕಾಯ್ದೆ ಫಲಾನುಭವಿಗಳೇ ಇದಕ್ಕೆ ಸ್ವಷ್ಟ ನಿರ್ದಶನ ಎಂದು ಹೇಳಿದರು.
ಈ ಸಂದರ್ಭ ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ಬೈಲ್, ರೈತ ಸಂಘದ ಯಾದವ ಶೆಟ್ಟಿ, ವಿಚಾರವಾದಿ ನರೇಂದ್ರ ನಾಯಕ್, ವಕೀಲರಾದ ಯಶವಂತ ಮರೋಳಿ, ಸಮುದಾಯ ಸಂಘಟನೆಯ ಮುಖಂಡ ವಾಸುದೇವ್ ಉಚ್ಚಿಲ್, ನಿವೃತ್ತ ಪ್ರಾಂಶುಪಾಲ ಡಾ. ಇಸ್ಮಾಯಿಲ್ ಸಂವಾದಲ್ಲಿ ಪಾಲ್ಗೊಂಡಿದ್ದರು.