Header Ads
Header Ads
Header Ads
Header Ads
Header Ads
Header Ads
Breaking News

ಸುಳ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಜಾಗೃತಿ : ತಹಶೀಲ್ದಾರ್ ನೇತೃತ್ವದಲ್ಲಿ ಸಭೆ

ಪ್ಲಾಸ್ಟಿಕ್ ಮುಕ್ತ ಸುಳ್ಯ ನಗರ ನಿರ್ಮಾಣಕ್ಕೆ ಪ್ರಥಮ ಪ್ರಯತ್ನವೆಂಬಂತೆ ಪ್ಲಾಸ್ಟಿಕ್ ಕೈಚೀಲ, ಮಾರಾಟ ನಿಷೇಧ ಹಾಗೂ ಒಳಕೆಗೆ ಕಡಿವಾಣ ಕಾಕುವ ಉದ್ದೇಶದಿಂದ ಆ. 7ರಂದು ನಗರದಲ್ಲಿ ಜಾಗೃತಿ ಜಾಥಾ ಕಮ್ಮಿಕೊಳ್ಳಲು ಪ್ಲಾಸ್ಟಿಕ್ ಮುಕ್ತ ಸುಳ್ಯ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಸುಳ್ಯ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಕುಂಞಿ ಅಹಮ್ಮದ್ ನೇತೃತ್ದದಲ್ಲಿ ಸಭೆ ನಡೆಯಿತು

ಸಭೆಯಲ್ಲಿ ವಿವಿಧ ಸಂಘಸಂಸ್ಥೆ, ಜನಪ್ರತಿನಿಧಿಗಳು ವಿದ್ಯಾರ್ಥಿಗಳನ್ನು ಜಾಥಾದಲ್ಲಿ ಸೇರಿಸಿಕೊಳ್ಳುವುದು. ಜತೆಗೆ ಪ್ಲಾಸ್ಟಿಕ್ ಚೀಲದ ಬದಲು ಬಟ್ಟೆ ಚೀಲ ಇತ್ಯಾದಿಗಳನ್ನು ಬಳಕೆ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಆ.7 ರಂದು ಪ್ಲಾಸ್ಟಿಕ್ ನಿಷೇಧ ಕುರಿತಂತೆ ಜಾಗೃತಿ ಕಾರ್ಯಕ್ರಮ ನಡೆಸುವುದೆಂದು ತೀರ್ಮಾನಿಸಲಾಯಿತು. ಪ್ಲಾಸ್ಟಿಕ್ ನಿಷೇಧಕ್ಕೆ ಆ.15 ರ ಗಡುವು ನೀಡಿ ಆ ಬಳಿಕವೂ ಮುಂದುವರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರರು ತಿಳಿಸಿದರು.

ನಗರದಲ್ಲಿ ಈ ಪ್ರಯತ್ನ ಯಶ ಕಂಡ ಬಳಿಕ ಅದನ್ನು ಇಡೀ ತಾಲೂಕಿಗೆ ವಿಸ್ತರಿಸಲಾಗುವುದು. ಬಳಿಕ ತಾಲೂಕಿನ ಪ್ರತಿ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಹಶೀಲ್ದಾರ್ ಹೇಳಿದರು.

ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಮಾತನಾಡಿ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಪರಿವರ್ತನೆ ಮಾಡುವಲ್ಲಿ ನಗರದ ವರ್ತಕರು ಸಹಕಾರ ನೀಡಲಿದ್ದಾರೆ. ತಕ್ಷಣ ನಿಷೇಧ ಸಾಧ್ಯವಾಗದಿದ್ದರೂ ಗರಿಷ್ಟ ಪ್ರಮಾಣದಲ್ಲಿ ನಿಯಂತ್ರಣ ಮಾಡಲು ಸಾಧ್ಯವಿದೆ. ನಗರ ಪಂಚಾಯತ್ ಸದಸ್ಯರು ಪ್ರತಿ ವಾರ್ಡ್‌ಗಳಲ್ಲಿ ಜಾಗೃತಿಗೆ ಕೈಜೋಡಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಶಿಕ್ಷಣ ಇಲಾಖೆಯ ಚಂದ್ರಶೇಖರ, ನ.ಪಂ.ಆರೋಗ್ಯ ನಿರೀಕ್ಷಕ ರವಿಕೃಷ್ಣ, ಅಶೋಕ್ ಎಡಮಲೆ, ಪ್ರದೀಪ್ ಕುಮಾರ್ ಕೆ.ಎಲ್, ವಿನೋದ್ ಲಸ್ರಾದೋ , ಲೋಕೇಶ್ ಕೆರೆಮೂಲೆ, ಸುಂದರ ರಾವ್, ಅಬ್ದುಲ್ ಹಮೀದ್, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *