ಮುಂಬಯಿಯ ಮಹಾನಗರದ ಪ್ರತಿಷ್ಠಿತ ಕೋ. ಆಪರೇಟಿವ್ ಬ್ಯಾಂಕ್ಗಳಲ್ಲೊಂದಾದ ಭಾರತ್ ಕೋ. ಆಪರೇಟಿವ್ ಬ್ಯಾಂಕ್ನ 44ನೇ ವಾರ್ಷಿಕ ಮಹಾಸಭೆಯು ಇದೇ ಮೊದಲ ಬಾರಿಗೆ ವಚ್ರ್ಯುವಲ್ ಮಾದರಿಯಲ್ಲಿ ಗೋರೆಗಾಂವ್ನಲ್ಲಿರುವ ಬ್ಯಾಂಕ್ನ ಪ್ರಧಾನ ಕಚೇರಿಯಲ್ಲಿ ಕಾರ್ಯಧ್ಯಕ್ಷ ಉಪ್ಪೂರು ಶಿವಾಜಿ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ ಚಂದ್ರಶೇಖರ್ ಎನ್. ಪೂಜಾರಿ, ಅವರು ದೀಪಪ್ರಜ್ವಲಿಸಿ ಮಹಾಸಭೆಗೆ ಚಾಲನೆಯನ್ನು ನೀಡಿದರು.ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಯಾಧ್ಯಕ್ಷ ಉಪ್ಲೂರು ಶಿವಾಜಿ ಪೂಜಾರಿಯವರು, ಬ್ಯಾಂಕ್ನ ನಿರ್ದೇಶಕರು, ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ಪರವಾಗಿ ಎಲ್ಲರನ್ನೂ ಸ್ವಾಗತಿಸಿದರು. 2019-20ನೇ ಹಣಕಾಸು ವರ್ಷದಲ್ಲಿ ನೀಡಿದ ಬೆಂಬಲ ಮತ್ತು ಸಹಕಾರಕ್ಕಾಗಿ ತಾನು ಸರ್ವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದರು. ಇತ್ತೀಚೆಗೆ ನಮ್ಮನ್ನಗಲಿದೆ ಬ್ಯಾಂಕ್ನ ಮಾಜಿ ಕಾರ್ಯಾಧ್ಯಕ್ಷ ಹಾಗೂ ನಮಗೆಲ್ಲರಿಗೂ ಸ್ಪೂರ್ತಿಯಾಗಿದ್ದ ಜಯ.ಸಿ. ಸುವರ್ಣ ಅವರಿಗೆ ನಿರ್ದೇಶಕರ ಮಂಡಳಿಯ ಪರವಾಗಿ ಈ ಸಂದರ್ಭದಲ್ಲಿ ಹೃದಯಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭ ವರ್ಚುವಲ್ ಮಹಾಸಭೆಯಲ್ಲಿ ಬ್ಯಾಂಕ್ನ ಉಪಾಧ್ಯಕ್ಷ ರೋಹಿಣಿ ಜೆ. ಸಾಲ್ಯಾನ್, ನಿರ್ದೇಶಕರುಗಳಾದ ವಾಸುದೇವ ಆರ್, ಕೋಟ್ಯಾನ್, ಜ್ಯೋತಿ ಕೆ. ಸುವರ್ಣ, ಭಾಸ್ಕರ್ ಎಂ. ಸಾಲ್ಯಾನ್, ಜಯ ಎ. ಕೋಟ್ಯಾನ್, ಕೆ.ಬಿ.ಪೂಜಾರಿ, ಸೋಮನಾಥ್ ಬಿ. ಅಮೀನ್, ಗಂಗಾಧರ್ ಜೆ. ಪೂಜಾರಿ, ಸೂರ್ಯಕಾಂತ್ ಜೆ. ಸುವರ್ಣ, ಮೊದಲಾದವರು ಉಪಸ್ಥಿತರಿದ್ದರು.
ಬ್ಯಾಂಕ್ನ ಸಿಇಒ ವಿದ್ಯಾನಂದ ಕರ್ಕೇರಾ ಕಾರ್ಯಕ್ರಮ ನಿರ್ವಹಿಸಿದರು.